ಪೀಠಿಕೆ ಜಾಸ್ತಿ ಆಯ್ತೇನೋ, ಆದ್ರೆ ಹೇಳ್ತೀನಿ ಕೇಳಿ.
ಇತ್ತೀಚಿನ ಎಪಿಸೋಡ್ ಗಳಲ್ಲಿ ಇದರಲ್ಲಿ ಬರುವ ನಂದಿನಿ ಪಾತ್ರಧಾರಿಗೆ ಆಕೆಯ ಲಂಗ್ಸ್ ಶೇ೯೫ ರಷ್ಟು ಫೇಲ್ ಆಗುತ್ತೆ. ಆಕೆ ಬದುಕುವ ಸಂಭವ ತೀರಾ ಕಮ್ಮಿ ಅಂತಾರೆ ವೈದ್ಯರು. ಇದನ್ನೇ ಸುಮಾರು ೨-೩ ವಾರ ಎಳೆದು ಎಳೆದು ಅಂತು ದೇವರ ದಯೆಯಿಂದ ಆಕೆ ಹುಶಾ

ಅಕ್ಷರಶಃ ಬೆಳದಿಂಗಳ ಬಾಲೆಯ ಹಾಗಿದ್ದ ಆಕೆ ಈಗ ಹೇಗಿದ್ದಾಳೆ ಗೊತ್ತಾ? ನಮಗೆಲ್ಲ ಉಳಿದಿದ್ದ ಒಂದೇ ದಾರಿ ಆ ದೇವ್ರು. ಒಂದು ಕ್ಷಣ ಬಿಡದೆ ಪ್ರಾರ್ಥನೆ ಮಾಡಿದ್ವಿ. ಸಿಕ್ಕ ಸಿಕ್ಕವರಿಗೆಲ್ಲ ದೇವರಲ್ಲಿ ಬೇಡಿ ಅಂತ ಎಸ್ಸೆಮ್ಮೆಸ್ಸು ಕಳಿಸ್ದೆ ನಾನು. ಕೆಲವು ಸಹೃದಯಿಗಳು ಅದಕ್ಕೆ ಸ್ಪಂದಿಸಿದರು ಕೂಡ. ಆಗ ನನ್ನ ಮನಸ್ಸಿಗೆ ಇದೆ ನಂದಿನಿ ಬಂದಳು. ಇನ್ನೇನು ಸಾವಿನ ಮನೆ ಕದ ತಟ್ಟಿ ನಿಂತವಳು ಅದೆಷ್ಟು ಚೆನ್ನಾಗಿ ಗುಣವಾದಳು? ಸಿಬಿಲ್ ಗೂ ಹಾಗೆ ಆದ್ರೆ? ಛೆ! ತಿಳಿದು ತಿಳಿದು ನಾನ್ಯಾಕೆ ಒಳ್ಳೆ ಫಿಲ್ಮಿ ಆಗಿ ಯೋಚಿಸ್ತಿದ್ದಿನಿ? ವಾಸ್ತವ ಬೇರೆ ತಾನೆ? ಹೇಳಿ ಕೇಳಿ ಆಕೆ ನನ್ನ ಹತ್ತಿರದ ಗೆಳತಿಯಲ್ಲ, ನನ್ನ ಸಂಬಂಧಿಯಲ್ಲ. ಆದ್ರೆ ಅದೊಂದು ಜೀವ ತಾನೆ? ಅದನ್ನು ನಂಬಿ ಕುಳಿತ ಮತ್ತಿಬ್ಬರು ಅಮಾಯಕರು ಕೈಲಿ ಜಪ ಸರ ಹಿಡಿದು ಹಗಲು ರಾತ್ರಿ ದೇವರಲ್ಲಿ ಮೊರೆ ಇಡುತ್ತಿದ್ದಾರೆ ( ಆಕೆಯ ತಂದೆ ತಾಯಿ). ದೇವರ ದಯೆ ನಮ್ಮ ಕಡೆ ಇದ್ಯೇನೋ ಆಕೆ ಆಶ್ಚರ್ಯವೆಂಬಂತೆ ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಇದೊಂದು ಮಾತು ನಮ್ಮಲ್ಲಿ ಉತ್ಸಾಹ ಮೊಡಿಸಿದೆ. ಸಿನಿಮಾ ಸೀರಿಯಲ್ ಗಳಲ್ಲಿ ಡೈರೆಕ್ಟರುತನಗೆ ಬೇಕಾದ ಹಾಗೆ ಪಾತ್ರಗಳನ್ನು ಸಾಯಿಸಿ ಮತ್ತೆ ಬದುಕಿಸುವುದು ಅವರಿಗೆ ರೀಲ್ ಕತ್ತರಿಸಿದಷ್ಟೇ ಸುಲಭ. ಆದ್ರೆ ರಿಯಲ್ ಲೈಫ್ ಹಾಗಲ್ಲವಲ್ಲ? ಎಲ್ಲಕ್ಕೂ ಸೂತ್ರಧಾರ ಅವನೇ ತಾನೆ? ಸದ್ಯ ದೇವರ ಕೃಪೆಯಿಂದ ಎಲ್ಲಾ ಒಳ್ಳೆದಾಗಲಿ ಅನ್ನೋದು ನಮ್ಮೆಲ್ಲರ ಆಶಯ. ನೀವು ಈ ಲೇಖನ ನೋಡಿದ್ರೆ ಆ ಜೀವಕ್ಕಾಗಿ ಒಂದೇ ಒಂದು ಶುಭ ಹಾರೈಕೆಯನ್ನ ಕೊಡ್ತಿರಾ. ಅದಕ್ಕೆ ಕಾಸು ಖರ್ಚು ಮಾಡಬೇಕಿಲ್ಲ. ಮನಸ್ಸು ಮಾಡಬೇಕು ಅಷ್ಟೆ.