Wednesday, August 13, 2008

ಪ್ಯಾರೆ ಭಯ್ಯಾ....ಸಲ್ಲೂ....ಶ್ರಾವಣ ಬಂತು ಅಂದ್ರೆ ಸಾಕು ಹಬ್ಬಗಳೋ ಹಬ್ಬಗಳು. ಅದ್ರಲ್ಲೂ ಅಣ್ಣ ತಂಗಿಯರ ಬಾಂಧವ್ಯದ ಸಂಕೇತವಾದ ರಕ್ಷಾಬಂಧನವಂತೂ ಇತರೆ ಹಬ್ಬಗಳಂತೆ ತನ್ನದೇ ಆದ ಪ್ರಾಮುಖ್ಯತೆ ಪಡೆದಿದೆ. ಅರೆರೇ ಇದೆಲ್ಲಾ ಗೊತ್ತಿರೋ ವಿಚಾರಾನೇ ಹೊಸತೇನಾದ್ರೂ ಹೇಳ್ಬಾರ್ದಾ ಅಂತ ಕೇಳ್ಬೇಡಿ. ಯಾಕಂದ್ರೆ ವಿಷಯ ಇರೋದೇ ಅಲ್ಲಿ. ಕೆಲ ಸಮಯದ ಹಿಂದೆ ಸಭಾ ಮತ್ತು ಫರ್ಹಾ ಅನ್ನೋ ಸಯಾಮಿ ಅವಳಿಗಳ ಬಗ್ಗೆ ಕೇಳಿದ್ದು ನೆನಪಿದೆಯಾ? ಹುಟ್ಟುತ್ತಲೇ ಬೆಸೆದುಕೊಂಡ ದೇಹ ಹೊತ್ತು ಒಬ್ಬರ ಮುಖವನ್ನು ಮತ್ತೊಬ್ಬರು ನೋಡಲಾಗದೆ ತಳಮಳಿಸುತ್ತಿದ್ದ ಈ ಸಯಾಮಿ ಅವಳಿಗಳಿಗೆ ಅಂದು ಕರುಣೆಯ ಮಹಾಪೂರವೇ ಹರಿದು ಬಂದಿತ್ತು. ಅಬುದಾಬಿಯ ದೊರೆಯಂತೂ ಈ ಸಯಾಮಿ ಅವಳಿಗಳನ್ನು ಬೇರ್ಪಡಿಸಲು ತಗಲುವ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಗಂಟಾಘೋಷವಾಗಿ ಹೇಳಿದ್ದೇ ಬಂತು.

ಇದೆಲ್ಲಾ ಹಳೇ ಕಥೆ....

ಈ ಸಯಾಮಿ ಅವಳಿ ಸಹೋದರಿಯರಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅಂದ್ರೆ ಅಚ್ಚು ಮೆಚ್ಚು, ಪಂಚ ಪ್ರಾಣ. ಹೇಗಾದ್ರೂ ಮಾಡಿ ಸಲ್ಲೂ ಮಿಯಾನ meet ಮಾಡ್ಲೇಬೇಕು ಅಂತ ಈ ಸಯಾಮಿ ಸಹೋದರಿಯರು ರಚ್ಚೆ ಹಿಡಿದು ಕೂತಿದ್ದಾರಂತೆ. ಆದ್ರೆ ತುತ್ತು ಕೂಳಿಗೂ ಆಕಾಶ ನೋಡೋ ಅಪ್ಪ ಮಾಡೋದಾದ್ರೂ ಏನು?

ಆದ್ರೆ ಹೊರಗಿನ ಮಂದಿಗೆ ಗೊತ್ತಾಗದಂತೆ publicity gimic ಮಾಡದೆ ಸಹಾಯ ಮಾಡೋದ್ರಲ್ಲಿ ಸಲ್ಲು ಒಂದು ಹೆಜ್ಜೆ ಮುಂದು ಅನ್ನೋ ಮಾತು ಬಾಲಿವುಡ್ ನಲ್ಲಿ ಜನಜನಿತ. ಈಗ ಸಲ್ಮಾನ್ ಬರಲಿರುವ ರಕ್ಷಾಬಂಧನದಂದು ತನಗೆ ರಾಖಿ ಕಟ್ಟಲು ತುದಿಗಾಲಲ್ಲಿ ನಿಂತಿರುವ ಈ ಸಭಾ ಮತ್ತು ಫರ್ಹಾರನ್ನ ಭೇಟಿ ಮಾಡೇ ತೀರುವ ಸಂಕಲ್ಪ ಮಾಡಿದ್ದಾರಂತೆ. ಜೊತೆಗೆ ಸಲ್ಲುವನ್ನು ಭೇಟಿ ಮಾಡೋಕೆ ವಿಮಾನದಲ್ಲಿ ಬರುವ ಸುಯೋಗ ಈ ಸಹೋದರಿಯರಿಗೆ ಸಿಕ್ಕಿದೆ. ಈ ವ್ಯವಸ್ಥೆಯನ್ನೂ ಖುದ್ದು ಸಲ್ಮಾನ್ ಮಾಡಿದ್ದಾರೆ.

ಬೇರೆಯವರಿಗೆ ಸಹಾಯ ಹಸ್ತ ಚಾಚೋದಂದ್ರೆ ಮಾರು ದೂರ ಹಾರೋ ಎಷ್ಟೋ ಸಿರಿವಂತರ ಮುಂದೆ ಸಲ್ಮಾನ್ ನಿಜಕ್ಕೂ great ಅನ್ನಿಸ್ತಾರೆ ಅಲ್ವಾ? ಹುಟ್ಟಿನಿಂದ ಈವರೆಗೂ ಒಬ್ಬರ ಮುಖ ಮತ್ತೊಬ್ಬರು ನೋಡದೆ ಸನ್ಮಾನ್ ಮುಖ ನೋಡಲು ಕಾತರಿಸುತ್ತಿರುವ ಸಯಾಮಿ ಸಹೋದರಿಯರಿಗೆ ರಕ್ಷಾ ಬಂಧನದ ಮೂಲಕ ಸೋದರ ಪ್ರೇಮ ತೋರ ಹೊರಟಿರುವ ಸಲ್ಲು ನಿನಗೊಂದು ಸಲಾಮ್...

1 comment:

ರಾಧಾಕೃಷ್ಣ ಆನೆಗುಂಡಿ. said...

ಪಾಪ........ಮಾಡಿರೋ ಪಾಪ ತೊಳೆಯುವ ಯತ್ನ ಅನ್ನಿಸುತ್ತೆ.