ನಟ ಆಮೀರ್ ಖಾನ್ ಸಿನಿಮಾ ಅಂದ್ರೆ ಅಲ್ಲೇನೋ ಭಾರೀ ವಿಶೇಷತೆ ಇದೆ ಅಂತಾನೇ ತಿಳ್ಕೊಬೇಕು. ವರ್ಷಕ್ಕೊಂದೇ ಸಿನಿಮಾ ಆದ್ರೂ ಸರಿ, that shoud be best ಅನ್ನೋದು ಆಮೀರ್ ಸಿದ್ಧಾಂತ. ಸದ್ಯ ತಮಿಳಿನ ರಿಮೇಕ್ ಆದ ತನ್ನ ಘಜಿನಿ ಚಿತ್ರದ promotion ನಲ್ಲಿ busy ಆಗಿರುವ ಆಮೀರ್ ಹೊಸ ಗಿಮಿಕ್ ಗಳಿಂದ ಅ
ಭಿಮಾನಿಗಳನ್ನು ಸೆಳೆಯೋದು ಹೊಸತೇನಲ್ಲ.

ಘಜಿನಿಗಾಗಿ ಆಮೀರ್ ತನ್ನ hair style ಆನ್ನು different ಆಗಿ ಮಾಡಿಕೊಂಡಿರೋದು ಗೊತ್ತೇ ಇದೆ. ತಮಿಳಿನ ಬಹು ಬೇಡಿಕೆಯ ತಾರೆ ಆಸೀನ್ ಳನ್ನು ಬಾಲಿವುಡ್ ಗೆ ಪರಿಚಯಿಸುತ್ತಿರುವ ಆಮೀರ್ ಈ ಸಿನಿಮಾಗಾಗಿ ಬಹಳಷ್ಟು ಶ್ರಮವಹಿಸಿ ಈ ಕೇಶ ವಿನ್ಯಾಸ ಮಾಡಿಸಿದ್ದಾರಂತೆ. ಈಗ ಈ hair style ನಮ್ಮ ಬೆಂಗಳೂರಿನ ಕಾಲೇಜುಗಳಲ್ಲಿ ಭಾರೀ ಫೇಮಸ್ಸು! ಅದೆಷ್ಟರ ಮಟ್ಟಿಗೆ ಅಂದ್ರೆ ಎಷ್ಟೋ ಕಾಲೇಜುಗಳ ಆಡಳಿತ ಮಂಡಳಿ ಈ ಘಜಿನಿ hair styleನಲ್ಲಿ ಬರೋ ವಿದ್ಯಾರ್ಥಿಗಳಿಗೆ ಕಾಲೇಜಿನೊಳಗೆ ಪ್ರವೇಶವಿಲ್ಲ ಅನ್ನೋ ಕಾನೂನು ಮಾಡುವಷ್ಟು ಕಂಗೆಟ್ಟಿವೆ ಅನ್ನೋ ಸುದ್ದಿಯುಂಟು.
ಆದ್ರೆ ಇದಕ್ಕೆ ಆಮೀರ್ ಕೊಡೋ ಸಮರ್ಥನೆನೇ ಬೇರೆ. ಕ್ಲಾಸಿಗೆ ಸರಿಯಾಗಿ students ಬರೋದಷ್ಟೆ ಮುಖ್ಯ ಹೊರತು ಇದಲ್ಲ ಅಂತಾರೆ. ಅಷ್ಟೇ ಅಲ್ಲ, ಮುಂಬಯಿಯ ತನ್ನ ಬಾಂದ್ರಾ ನಿವಾಸದ ಬಳಿ ಪಡ್ಡೆಗಳು ಘಜಿನಿ hair styleನಲ್ಲಿ ತಿರುಗುತ್ತಿದ್ದದ್ದು ಆಮೀರ್ ಸಾಹೇಬರಿಗೆ ಭಾರೀ ಖುಷಿ ತಂದಿದೆಯಂತೆ.

ತನ್ನ ಸಿನಿಮಾವನ್ನು ಯಾವ ರೀತಿ ಜನರತ್ತ ತಲ್ಘಿಸಬೇಕು ಅನ್ನೋದು ಬಹುಶಃ ಆಮೀರ್ ಗೆ ಬಹಳ ಚೆನ್ನಾಗೇ ಗೊತ್ತಿದೆ ಅಂತಾಯ್ತು. ಅದೇನೇ ಇರ್ಲಿ ಸದಾ ಹೊಸತನ್ನೇ ಕೊಡ ಬಯಸುವ ಆಮೀರ್ ಗೆ ಘಜಿನಿ ಯಶಸ್ಸು ತರ್ಲಿ ಅಂತ ಆಶಿಸೋಣ.
5 comments:
blogging in full zoomu:)
ನನಗೂ ಅಮೀರ್ ತರ ಹೇರ್ ಸ್ಟೈಲ್ ಮಾಡಿಸುವಾಸೆ. ಆದರೆ.......... ರಜಾ ಇಲ್ವೆ .
good one, wonder how do I type in Kannada
can someone help me on that
good one.. keep it up
Post a Comment