Tuesday, August 5, 2008

ಮತ್ತೆ ಕಿಶೋರ್ ದಾ....

ನಾನು ಮೊದ್ಲೇ ಹೇಳಿದ್ದೆ,

ಮುಂದಿನ್ ಸಲ ಒಂದ್ ಜಬರ್ದಸ್ತ್ ವಿಷಯ ಇದೆ ಅಂತ.... ಅದೇನ್ ಗೊತ್ತಾ? ನಮ್ ಕಿಶೋರ್ ಕುಮಾರ್ ಅವ್ರು ಗೊತ್ತಲ್ಲಾ? ಅದೇ ರೀ...ಭಾರತ ಸಿನಿಮಾ ಲೋಕದ ದಂತಕತೆ...ಕಿಶೋರ್ ದಾ ಇಹಲೋಕ ತ್ಯಜಿಸಿ ೨೦ ವರ್ಷಗಳೇ ಕಳೆದ್ವು. ಆದ್ರೂ ಆ ಮಹಾನ್ ಕಲಾವಿದನನ್ನು ಮರೆಯೋಕೆ ಸಾದ್ಯವೇ ಇಲ್ಲ. ಕಿಶೋರ್ ದಾ ಕೆಲಸ ಮತ್ತು ವಯಕ್ತಿಕ ಜೀವನ ಎರಡೂ ಒಂದು ರೀತಿಯಲ್ಲಿ ರಂಜನೀಯ ಅಂತಾನೇ ಹೇಳಬಹುದು. ಅವ್ರ ಜೀವನವೇ ಒಂದು ಸಿನಿಮಾ ಆಗುತ್ತೆ ಅಂತ ಬಹಳಷ್ಟು ಮಂದಿಗೆ ಅನ್ಸಿತ್ತನ್ತೆ. ಆದ್ರೆ ಕಿಶೋರ್ ದಾ ಮನೆಯವ್ರಿಗೆ ಅಂತಿಂತಾ ಚಿಕ್ಕ ಪುಟ್ಟ ಸಿನಿಮಾ ಮಾಡೋರ್ಗೆ ಹಕ್ಕು ಕೊಡೋಕೆ ಇಷ್ಟ ಇರ್ಲಿಲ್ಲ. ಹಾಗಾಗಿ ತಾವೇ ಖುದ್ದು ಸ್ವಂತ ಪ್ರೊಡಕ್ಷನ್ ನಲ್ಲಿ ಕಿಶೋರ್ ದಾ ಬಗ್ಗೆ ಸಿನಿಮಾ ಮಾಡ್ತಿದ್ದಾರೆ.
ಕಿಶೋರ್ ದಾರ ನಾಲ್ಕನೇ ಪತ್ನಿ ಲೀನಾ ಚೆಂದಾವರ್ಕರ್ ಸುಮಾರು ೫೦-೬೦ ಕೋ ವೆಚ್ಚದಲ್ಲಿ ಕಿಶೋರ್ ದಾರ ೭೯ನೇ ಜನ್ಮ ದಿನದ ನೆನಪಿನಲ್ಲಿ ಸಿನಿಮಾ ಮಾಡಹೊರಟಿದ್ದಾರೆ. ರಂಗ್ ದೇ ಬಸಂತಿಯಂತಹ ಉತ್ತಮ ಸಿನಿಮಾಗೆ ಕತೆ ಬರೆದಿದ್ದ ರೆನ್ಝಿಲ್ ಡಿಸೋಜ ಕಿಶೋರ್ ದಾ ಸಿನಿಮಾಗೂ ಕತೆ ಬರೆಯಲಿದ್ದಾರಂತೆ. ರುಮಾ ದೇವಿ, ಮದುಬಾಲಾ, ಯೋಗಿತಾ ಬಾಲಿ, ಮತ್ತು ಲೀನಾ ಚೆಂದಾವರ್ಕರ್ ರಂತಹ ಸುಂದರಿಯರನ್ನು ವಿವಾಹವಾಗಿದ್ದ ಕಿಶೋರ್ ದಾ ಕೇವಲ ನಟರಷ್ಟೇ ಅಲ್ಲ, ಗೀತ ರಚನೆಕಾರ, ನಿರ್ಮಾಪಕ, ನಿರ್ದೇಶಕ, ಕತೆಗಾರರಾಗಿ ಹೆಸರು ಮಾಡಿದವರು. ಈಗ ಲೀನಾ ಚೆಂದಾವರ್ಕರ್ ಖುದ್ದು ಆಸಕ್ತಿ ವಹಿಸಿ ಕಿಶೋರ್ ದಾ ಬಗ್ಗೆ ಸಿನಿಮಾ ಮಾಡ ಹೊರಟಿದ್ದಾರೆ. ಅಲ್ಲದೆ ತಮ್ಮ ಮಕ್ಕಳಾದ ಅಮಿತ್ ಮತ್ತು ಪುನೀತ್ ಕೂಡ ಈ ಕಾರ್ಯದಲ್ಲಿ ಸಹಕರಿಸಲಿದ್ದಾರೆ ಅನ್ನೋದು ಚೆಂದಾವರ್ಕರ್ ಗೆ ಮತ್ತಷ್ಟು ಖುಷಿ. ಅಲ್ಲದೆ ಚೆಂದಾವರ್ಕರ್ ಜೊತೆ ಅಮಿತ್ ಪುನಿತ್ ತೆರೆಯ ಮೇಲೆ ಬರ್ತಾ ಇರೋದು ಮತ್ತೊಂದು ವಿಶೇಷ.
ಆದ್ರೆ ರುಮಾ ದೇವಿ ಹಾಗೂ ಸದ್ಯ ನಟ ಮಿತುನ್ ಚಕ್ರವರ್ತಿಯ ಪತ್ನಿಯಾಗಿರುವ ಯೋಗಿತಾ ಬಾಲಿ ಸಿನಿಮಾದಲ್ಲಿ ಕಾಣಿಸಿಕೊಳ್ತಾರಾ ಇಲ್ವಾ ಅನ್ನೋದು ಸದ್ಯಕ್ಕೆ ರಹಸ್ಯ.

ಅಂತೂ ಬಾಲಿವುಡ್ ದಂತಕತೆ ಕಿಶೋರ್ ದಾ ಸಿನಿಚಾ ರೂಪದಲ್ಲಿ ಆದಷ್ಟು ಬೇಗ ಬೆಳ್ಳಿ ತೆರೆಯ ಮೇಲೆ ರಾರಾಜಿಸಲಿ ಅನ್ನೋದು ಎಲ್ಲರ ಆಸೆ. ಹಾಗಂತ ಕಿಶೋರ್ ದಾರ ಪತ್ನಿಯರಲ್ಲೆ ಅತಿ ಸುಂದರಿಯಾಗಿದ್ದ ಲೀನಾ ಚೆಂದಾವರ್ಕರ್ ಪಾತ್ರದಲ್ಲಿ ಮಿಂಚಲಿರುವ ಮೀಂಚುಳ್ಳಿ ಇದೇ ಚೆಲುವೆ.ಸರಿ ಗೆಳೆಯರೇ ಸುದ್ದಿ ಇಷ್ಟ ಆದ್ರೆ ಹೇಳಿ, ಇಷ್ಟ ಆಗ್ದಿದ್ರೂ ಹೇಳಿ
ಕಾಯ್ತಾ ಇರ್ತೀನಿ........ಮತ್ತೆ ಸಿಗೋಣ್ವಾ.......?

2 comments:

ಶ್ರೀನಿಧಿ.ಡಿ.ಎಸ್ said...

nice info!:)

Neethu said...

Informative blog, go ahead...coming out well